ಕೊಡಗಿನ ಕೋಟೆ ಬೆಟ್ಟಕ್ಕೆ ಕುರಂಜಿ ಹೊದಿಕೆ
A Kurunji Blanket for the Kodagu Fort Hill ಮಡಿಕೇರಿ: ಕೊಡಗಿನ ಕೋಟೆ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಾರಣ ಈ ಬೆಟ್ಟದಲ್ಲಿ ಕುರುಂಜಿ ಮತ್ತೆ ಹೂಬಿಟ್ಟಿದೆ. ಇದು ನೀಲಿ ಸುಂದರಿಯಾಗಿ ಕಣ್ಮನ ಸೆಳೆಯುತ್ತಿದೆ. ಮಡಿಕೇರಿ ಸಮೀಪ ಇರುವ ಮಾಂದಾಲಪಟ್ಟಿ ಬೆಟ್ಟಶ್ರೇಣಿಯಲ್ಲಿರುವ ಕೋಟೆ ಬೆಟ್ಟವು ಕುರುಂಜಿ ಗಿಡಗಳಿಂದ ಆವೃತವಾಗಿದ್ದು, ಇದುವರೆಗೆ ಹಸಿರಾಗಿದ್ದ ಗಿಡಗಳು ಹನ್ನೆರಡು ವರ್ಷದ ಬಳಿಕ ನೀಲಿ ಹೂಗಳನ್ನು ಬಿಟ್ಟಿರುವ ಕಾರಣದಿಂದ ಇಡೀ ಬೆಟ್ಟ ನೀಲಿಯಾಗಿ ಕಾಣುತ್ತಿದ್ದು, ನೋಡುಗರ ಕಣ್ಣಿಗೆ ರಸದೌತಣ ನೀಡಿದೆ. ಕೊರೊನಾ ಇಲ್ಲದೆ ಹೋಗಿದ್ದರೆ ಈ ಸುಂದರ ದೃಶ್ಯವನ್ನು ನೋಡಲು ಪ್ರವಾಸಿಗರು ನೂಕು ನುಗ್ಗಲಿರುತ್ತಿತ್ತು. ಆದರೆ ಈಗ ಸ್ಥಳೀಯರು ಸೇರಿದಂತೆ ಒಂದಷ್ಟು ಮಂದಿ ಬಿಟ್ಟರೆ ಹೆಚ್ಚಿನವರು ಬರುತ್ತಿಲ್ಲ. ಸಾಮಾನ್ಯವಾಗಿ ಬೆಟ್ಟಗಳು ಕುರುಚಲು ಕಾಡು, ಮರಗಿಡಗಳಿಂದ ಕೂಡಿವೆ. ಇವುಗಳ ನಡುವೆ ಕೆಲವೇ ಕೆಲವು ಬೆಟ್ಟಗಳು ಮಾತ್ರ ಕುರುಂಜಿ ಗಿಡಗಳಿಂದ ಆವೃತವಾಗಿವೆ. ಅದರಲ್ಲಿ ಕೋಟೆ...